2025ರಲ್ಲಿ ಬೆಳಗಾವಿ ಜಿಲ್ಲೆಯ ಅಂಗನವಾಡಿ ನೇಮಕಾತಿ – WCD Belagavi Anganwadi Job Notification
ಬೆಳಗಾವಿ ಜಿಲ್ಲೆಯ ಅಂಗನವಾಡಿ ನೇಮಕಾತಿ 2025 – WCD Belagavi Anganwadi Recruitment 2025
WCD Belagavi Anganwadi Recruitment 2025: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬೆಳಗಾವಿ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರಗಳು, ಅರ್ಹತೆ, ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇತ್ಯಾದಿ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ:
ಮಂಗಳವಾರ ಹನುಮಂತನಿಗೆ ಈ 6 ಪವಿತ್ರ ಕಾರ್ಯಗಳನ್ನು ಮಾಡಿದರೆ – ಧನಸಂಪತ್ತು ನಿಮ್ಮ ಹಾದಿ ತಲೆದೋರಲಿದೆ!
WCD Belagavi Anganwadi Recruitment 2025: ಹುದ್ದೆಗಳ ವಿವರಗಳು ಹುದ್ದೆಗಳ ಹೆಸರು:
ಅಂಗನವಾಡಿ ಕಾರ್ಯಕರ್ತೆ
ಅಂಗನವಾಡಿ ಸಹಾಯಕಿ
ತಾಲೂಕುವಾರು ಹುದ್ದೆಗಳ ವಿವರಗಳು:
| ತಾಲೂಕು | ಕಾರ್ಯಕರ್ತೆ | ಸಹಾಯಕಿ |
|---|---|---|
| ಅರಭಾವಿ | 15 | 50 |
| ಅಥಣಿ | 11 | – |
| ಬೈಲಹೊಂಗಲ | 6 | 33 |
| ಬೆಳಗಾವಿ ಗ್ರಾಮೀಣ | 7 | 56 |
| ಬೆಳಗಾವಿ ನಗರ | – | 38 |
| ಚಿಕ್ಕೋಡಿ | 7 | 23 |
| ಗೋಕಾಕ್ | 6 | 34 |
| ಹುಕ್ಕೇರಿ | 8 | 29 |
| ಕಾಗವಾಡ | 7 | 28 |
| ಖಾನಾಪುರ | 8 | 35 |
| ಕಿತ್ತೂರು | 5 | 11 |
| ನಿಪ್ಪಾಣಿ | 10 | 59 |
| ರಾಯಭಾಗ | 12 | 82 |
| ರಾಮದುರ್ಗ | 5 | 27 |
| ಸವದತ್ತಿ | 7 | 20 |
| ಯರಗಟ್ಟಿ | 3 | 6 |
ಕಾರ್ಯಕ್ಷೇತ್ರ: ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನೇಮಕಾತಿ ನಡೆಯಲಿದೆ.
ಶೈಕ್ಷಣಿಕ ಅರ್ಹತೆ:
ಅಂಗನವಾಡಿ ಕಾರ್ಯಕರ್ತೆ: ಕನಿಷ್ಠ ಪಿಯುಸಿ ತೇರ್ಗಡೆ ಹೊಂದಿರಬೇಕು. ಕನ್ನಡ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು.
ಅಂಗನವಾಡಿ ಸಹಾಯಕಿ: ಎಸ್.ಎಸ್.ಎಲ್.ಸಿ ಅಥವಾ ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ವಯೋಮಿತಿ:
ಕನಿಷ್ಠ: 19 ವರ್ಷ
ಗರಿಷ್ಠ: 35 ವರ್ಷ (ವಿಕಲಚೇತನರಿಗೆ 10 ವರ್ಷ ಸಡಿಲಿಕೆ)
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಬೋನಸ್ ಅಂಕ ಮತ್ತು ಇತರ ಪ್ರಮಾಣಪತ್ರಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಲಾಗುವುದು. ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ
ಬುಧವಾರ ತಪ್ಪದೇ ಹೀಗೆ ಮಾಡಿ, ಎಲ್ಲಾ ಸಂಕಷ್ಟದಿಂದ ಮುಕ್ತಿ ಸಿಗುತ್ತೆ!
ಅರ್ಜಿ ಸಲ್ಲಿಕೆ ಹಂತಗಳು:
ಅಧಿಕೃತ ಅಧಿಸೂಚನೆ ಓದಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
ಇಲಾಖೆಯ ವೆಬ್‌ಸೈಟ್ ಅಥವಾ ಲಿಂಕ್ ಮೂಲಕ ಅರ್ಜಿ ಅರ್ಜಿ ಭರ್ತಿ ಮಾಡಿಕೊಳ್ಳಿ.
ಅರ್ಜಿಯಲ್ಲಿನ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಪರಿಶೀಲಿಸಿ.
ಅಗತ್ಯವಿದ್ದರೆ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಅರ್ಜಿ ಸಲ್ಲಿಕೆಗಾಗಿ ಅಗತ್ಯ ದಾಖಲೆಗಳು:
ಜನನ ಪ್ರಮಾಣ ಪತ್ರ / ಎಸ್.ಎಸ್.ಎಲ್.ಸಿ ಅಂಕಪಟ್ಟಿ
ವಿದ್ಯಾರ್ಹತೆಯ ಪ್ರಮಾಣ ಪತ್ರ
ವಾಸಸ್ಥಳ ದೃಢೀಕರಣ ಪತ್ರ (3 ವರ್ಷದೊಳಗಿನದು)
ಜಾತಿ ಪ್ರಮಾಣ ಪತ್ರ
ವಿಧವಾ ಪ್ರಮಾಣ ಪತ್ರ (ಪತಿ ಮರಣ ಪ್ರಮಾಣ ಪತ್ರ ಸಹಿತ)
ಅಂಗವಿಕಲತೆ ಪ್ರಮಾಣ ಪತ್ರ
ವಿಚ್ಛೇದನ ಪ್ರಮಾಣ ಪತ್ರ (ನ್ಯಾಯಾಲಯದಿಂದ)
ಅರ್ಜಿಶುಲ್ಕ: ಇಲ್ಲ.
ಮನೆಯಿಂದ ಹೊರಗಡೆ ಹೋಗುವಾಗ ಹಿಂದಿನಿಂದ ಕರೆಯಬಾರದು.! ಯಾಕೆ ಗೊತ್ತಾ?
ಅರ್ಜಿ ಸಲ್ಲಿಸಲು ದಿನಾಂಕಗಳು:
ಪ್ರಾರಂಭ ದಿನಾಂಕ: ಏಪ್ರಿಲ್ 16, 2025
ಕೊನೆಯ ದಿನಾಂಕ: ಮೇ 16, 2025
ಮಹತ್ವದ ಲಿಂಕ್ಸ್:
ಅಧಿಸೂಚನೆ: CLICK HERE
ಆನ್‌ಲೈನ್ ಅರ್ಜಿ: CLICK HERE
Telegram ಗುಂಪು: Click Here
WhatsApp ಗುಂಪು: Click Here
ಕೊನೆಯ ಮಾತು: ಈ ಉದ್ಯೋಗ ಮಾಹಿತಿ ನಿಮ್ಮಗೆ ಉಪಯುಕ್ತವಾಗಿದೆ ಎಂಬ ನಂಬಿಕೆ ನಮ್ಮದು. ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಗೆಳೆಯೆಯರು ಅಥವಾ ಇತರ ಮಹಿಳಾ ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಿ.
.jpg)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ