Virat Kohli: ಅಬ್ಬರಿಸಿ ಬೊಬ್ಬಿರಿದ ಕಿಂಗ್ ಕೊಹ್ಲಿ! ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ ವಿರಾಟ್ ಹೊಸ ದಾಖಲೆ
Virat Kohli: ಅಬ್ಬರಿಸಿ ಬೊಬ್ಬಿರಿದ ಕಿಂಗ್ ಕೊಹ್ಲಿ! ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ ವಿರಾಟ್ ಹೊಸ ದಾಖಲೆ
ಇದೀಗ ಕಿಂಗ್ ಕೊಹ್ಲಿ ಕೂಡಾ ಐಪಿಎಲ್ ಆರಂಭದ ಪಂದ್ಯದಲ್ಲೇ 50 ರನ್ ಬಾರಿಸಿದ್ದಾರೆ. ಆರಂಭದಿಂದಲೂ ಅಗ್ರೆಸಿವ್‌ನಲ್ಲೇ ಆಡಿಕೊಂಡು ಬರುತ್ತಿರುವ ಕಿಂಗ್ ಕೊಹ್ಲಿ ಈಗ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಅರ್ಧ ಶತಕ ಬಾರಿಸಿದ್ದಾರೆ.
ಐಪಿಎಲ್ 2025ರ ಆರಂಭದಲ್ಲಿ ಕೊಹ್ಲಿ ಶೋ
ಐಪಿಎಲ್ 2025ರ ಮೊದಲ ಪಂದ್ಯ ಈಗಾಗಲೇ ಆರಂಭಗೊಂಡಿದ್ದು, ಆರ್‌ಸಿಬಿ ತನ್ನ ಇನ್ನಿಂಗ್ಸ್ ಆರಂಭಿಸಿದೆ. ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
RCB ಗೆ 175 ರನ್ ಟಾರ್ಗೆಟ್
ಕೆಕೆಆರ್ 175 ರನ್ ಸಿಡಿಸುವ ಮೂಲಕ ಆರ್‌ಸಿಬಿಗೆ ಟಾರ್ಗೆಟ್ ನೀಡಿತ್ತು. ಇದನ್ನು ಚೇಸ್ ಮಾಡುವ ಉದ್ದೇಶದಲ್ಲಿ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಆರಂಭ ನೀಡಿದ್ದಾರೆ. ಪವರ್ ಪ್ಲೇನಲ್ಲೇ ಈ ಜೋಡಿ 80 ರನ್ ಗಳಿಸಿ ಆರ್ಭಟಿಸಿತು.
ಫಿಲ್ ಸಾಲ್ಟ್ ಮತ್ತು ಕೊಹ್ಲಿ ಭರ್ಜರಿ ಬ್ಯಾಟಿಂಗ್
ಆರಂಭದಲ್ಲಿ ಓಪನಿಂಗ್ ಬಂದಿದ್ದ ಕೊಹ್ಲಿ ಮತ್ತು ಸಾಲ್ಟ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಫಿಲ್ ಸಾಲ್ಟ್ 31 ಬಾಲ್‌ಗೆ 56 ರನ್ ಬಾರಿಸಿದ್ದು, ಇದರಲ್ಲಿ 9 ಬೌಂಡರಿ ಮತ್ತು 2 ಸಿಕ್ಸ್ ಸೇರಿವೆ. ನಂತರ ಔಟ್ ಆದ ಸಲ್ಟ್ ನಂತರ ದೇವ್‌ದತ್ತ ಪಡಿಕ್ಕಲ್ ಕ್ರೀಜ್ ಸೇರಿದರು.
ಐಪಿಎಲ್‌ನಲ್ಲಿ ವಿರಾಟ್ ಹೊಸ ದಾಖಲೆ
ಐಪಿಎಲ್ ಆರಂಭದಿಂದಲೂ ಆರ್‌ಸಿಬಿ ಜೊತೆಗಿರುವ ಕೊಹ್ಲಿ, 2011 ರಿಂದ 2023 ರವರೆಗೆ ತಂಡದ ನಾಯಕನಾಗಿದ್ದರು. ಈ ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ 252 ಪಂದ್ಯಗಳಲ್ಲಿ 8,004 ರನ್ ದಾಖಲಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 55 ಅರ್ಧಶತಕಗಳಿವೆ. ಅಲ್ಲದೆ, ಭಾರತದಲ್ಲಿ ನಡೆದ ಐಪಿಎಲ್‌ನಲ್ಲಿ 7 ಸಾವಿರ ರನ್ ಬಾರಿಸಿದ ಮೊದಲ ಆಟಗಾರ ಎಂಬ ಹೆಮ್ಮೆ ಇವರಿಗೆ.
400 ಟಿ20 ಪಂದ್ಯಗಳನ್ನು ಆಡಿದ ಮೂರನೇ ಭಾರತೀಯ
ವಿರಾಟ್ ಕೊಹ್ಲಿ 400 ಟಿ20 ಪಂದ್ಯಗಳನ್ನು ಆಡಿದ ಮೂರನೇ ಭಾರತೀಯ ಆಟಗಾರನಾಗಿದ್ದು, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ RCB vs KKR ಉದ್ಘಾಟನಾ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಕೆಕೆಆರ್ ವಿರುದ್ಧ 1,000+ ರನ್ ಹೊಡೆದ ಸಾಧನೆ
ಕೆಕೆಆರ್ ವಿರುದ್ಧ 1,000 ರನ್ ಹೊಡೆದ ಮೂರನೇ ಆಟಗಾರನಾಗಿ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಡೇವಿಡ್ ವಾರ್ನರ್ ಮತ್ತು ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದರು. ಈಗ ಈ ಪಟ್ಟಿಗೆ ಕೊಹ್ಲಿಯೂ ಸೇರ್ಪಡೆಯಾಗಿದ್ದಾರೆ.
RCB ಅಭಿಮಾನಿಗಳಿಗಾಗಿ ಇದು ಅತ್ಯಂತ ಖುಷಿಯ ಸುದ್ದಿ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ