IPL 2025 RCB vs KKR: ಎರಡು ತಂಡಗಳ ಪ್ಲೇಯಿಂಗ್ 11 ಹೇಗಿರಲಿದೆ? ಇಲ್ಲಿದೆ ಮಾಹಿತಿ!
IPL 2025 RCB vs KKR: ಎರಡು ತಂಡಗಳ ಪ್ಲೇಯಿಂಗ್ 11 ಹೇಗಿರಲಿದೆ? ಇಲ್ಲಿದೆ ಮಾಹಿತಿ!
IPL 2025 KKR vs RCB: ಎಲ್ಲರೂ ಕಾತರದಿಂದ ಕಾಯುತ್ತಿರುವ ಐಪಿಎಲ್ 2025ರ ಮೊದಲ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳು ಸೆಣಸಲಿವೆ. ಹಾಗಾದರೆ, ಎರಡು ತಂಡಗಳ ಪ್ಲೇಯಿಂಗ್ 11 ಹೇಗಿರಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪಂದ್ಯದ ವಿವರ
ತಾರೀಖು: ಮಾರ್ಚ್ 22, 2025
ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಸಮಯ: ಟಾಸ್ ಸಂಜೆ 7:00, ಪಂದ್ಯ ಪ್ರಾರಂಭ 7:30
ಲೈವ್ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ & JioCinema
RCB vs KKR: ಪ್ಲೇಯಿಂಗ್ 11 ವಿವರ
RCB ತಂಡ
ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ನಾಯಕ ರಜತ್ ಪಾಟಿದಾರ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ (ವಿಕೆಟ್ ಕೀಪರ್) ಮಧ್ಯಮ ಕ್ರಮಾಂಕವನ್ನು ಬಲಪಡಿಸಲಿದ್ದಾರೆ. ಆಲ್‌ರೌಂಡರ್ ಕೃನಾಲ್ ಪಾಂಡ್ಯ, ಮತ್ತು ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಹಾಗೂ ಸುಯಾಶ್ ಶರ್ಮಾ ಅಥವಾ ಸ್ವಪ್ನಿಲ್ ಸಿಂಗ್ ಭಾಗಿಯಾಗುವ ಸಾಧ್ಯತೆ ಇದೆ.
RCB ಸಂಭಾವ್ಯ ತಂಡ:
ಫಿಲ್ ಸಾಲ್ಟ್
ವಿರಾಟ್ ಕೊಹ್ಲಿ
ರಜತ್ ಪಾಟಿದಾರ್ (ನಾಯಕ)
ಲಿಯಾಮ್ ಲಿವಿಂಗ್‌ಸ್ಟೋನ್
ಜಿತೇಶ್ ಶರ್ಮಾ (ವಿಕೆಟ್ ಕೀಪರ್)
ಜಾಕೋಬ್ ಬೆಥೆಲ್/ಟಿಮ್ ಡೇವಿಡ್
ಕೃನಾಲ್ ಪಾಂಡ್ಯ
ಭುವನೇಶ್ವರ ಕುಮಾರ್
ಜೋಶ್ ಹ್ಯಾಜಲ್‌ವುಡ್
ಯಶ್ ದಯಾಳ್
ಸುಯಾಶ್ ಶರ್ಮಾ/ಸ್ವಪ್ನಿಲ್ ಸಿಂಗ್
KKR ತಂಡ
ಕೆಕೆಆರ್ ಪರ ಸುನೀಲ್ ನರೈನ್ ಮತ್ತು ಕ್ವಿಂಟನ್ ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ನಾಯಕ ಅಜಿಂಕ್ಯ ರಹಾನೆ 3ನೇ ಕ್ರಮಾಂಕದಲ್ಲಿ, ನಂತರ ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್ ಮತ್ತು ರಮಣದೀಪ್ ಸಿಂಗ್ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ, ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಪೆನ್ಸರ್ ಜಾನ್ಸನ್, ವೈಭವ್ ಅರೋರಾ, ಹರ್ಷಿತ್ ರಾಣಾ ಆಡುವ ಸಾಧ್ಯತೆಯಿದೆ.
KKR ಸಂಭಾವ್ಯ ತಂಡ:
ಸುನೀಲ್ ನರೈನ್
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್)
ಅಜಿಂಕ್ಯ ರಹಾನೆ (ನಾಯಕ)
ವೆಂಕಟೇಶ್ ಅಯ್ಯರ್
ಅಂಗ್ಕ್ರಿಶ್ ರಘುವಂಶಿ
ರಿಂಕು ಸಿಂಗ್
ಆಂಡ್ರೆ ರಸೆಲ್
ರಮಣದೀಪ್ ಸಿಂಗ್
ಸ್ಪೆನ್ಸರ್ ಜಾನ್ಸನ್
ವೈಭವ್ ಅರೋರಾ
ಹರ್ಷಿತ್ ರಾಣಾ/ವರುಣ್ ಚಕ್ರವರ್ತಿ
ಈ ಮಹತ್ವದ ಪಂದ್ಯದಲ್ಲಿ ನಿಮ್ಮ ಫೇವರಿಟ್ ತಂಡ ಯಾವುದು? ಕಾಮೆಂಟ್ ಮಾಡಿ! IPL 2025ನ ಲೈವ್ ಅಪ್ಡೇಟ್ಸ್‌ಗಾಗಿ Vidya TV Kannada ಬ್ಲಾಗ್ ಅನ್ನು ಫಾಲೋ ಮಾಡಿ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ