ಉತ್ತರಾಖಂಡ ಚಮೋಲಿ ಹಿಮನದಿ ಸ್ಫೋಟ: 4 ಕಾರ್ಮಿಕರು ಸಾವು, 50 ಜನರ ರಕ್ಷಣೆ
ಉತ್ತರಾಖಂಡ ಚಮೋಲಿ ಹಿಮನದಿ ಸ್ಫೋಟ: 4 ಕಾರ್ಮಿಕರು ಸಾವು, 50 ಜನರ ರಕ್ಷಣೆ
ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಗ್ರಾಮದಲ್ಲಿ ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಶಿಬಿರದ ಮೇಲೆ ಹಿಮನದಿ ಕುಸಿದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಶಿಬಿರದಲ್ಲಿ ಇದ್ದ 55 ಕಾರ್ಮಿಕರಲ್ಲಿ 50 ಜನರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಸೇನೆಯ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರೀವಾಸ್ತವ ದೃಢಪಡಿಸಿದ್ದಾರೆ.
ಘಟನೆ ವಿವರ
ಶುಕ್ರವಾರ ಬೆಳಿಗ್ಗೆ 5:30 ರಿಂದ 6 ಗಂಟೆಯ ನಡುವೆ ಮಾನಾ ಮತ್ತು ಬದರಿನಾಥ್ ನಡುವಿನ ಬಿಆರ್‌ಒ ಶಿಬಿರದಲ್ಲಿ ಭಾರೀ ಹಿಮಪಾತ ಸಂಭವಿಸಿತು. 55 ಕಾರ್ಮಿಕರು ಹಿಮನದಿಯ ಅಡಿಯಲ್ಲಿ ಸಿಲುಕಿದ್ದರು. ತಕ್ಷಣ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಮತ್ತು ಸೇನಾ ತಂಡಗಳು ಕಾರ್ಯಾಚರಣೆ ನಡೆಸಿ 50 ಜನರನ್ನು ರಕ್ಷಿಸಲಾಯಿತು. ಆದರೆ ನಾಲ್ವರು ಕಾರ್ಮಿಕರು ಮೃತಪಟ್ಟಿರುವುದು ದೃಢಪಟ್ಟಿದೆ. ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಇನ್ನೂ ರಕ್ಷಣಾ ಕಾರ್ಯದಲ್ಲಿ ನಿರತರಾಗಿವೆ.
ಸರಕಾರದ ಕ್ರಮ
ಘಟನೆ ಸಂಬಂಧ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹವಾಮಾನದ ಅವಲೋಕನ ನಡೆಸಿ, ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧಾಮಿ ಅವರೊಂದಿಗೆ ಮಾತುಕತೆ ನಡೆಸಿ ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ನಾಲ್ಕು ತಂಡಗಳನ್ನು ಸ್ಥಳಕ್ಕೆ ಕಳುಹಿಸಿದ್ದು, ಇನ್ನೂ ನಾಲ್ಕು ತಂಡಗಳು ಸಜ್ಜಾಗಿವೆ.
ರಕ್ಷಣಾ ಕಾರ್ಯಾಚರಣೆ
ಹಿಮಪಾತದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಕೆಲ ಹೊತ್ತಿನವರೆಗೆ ಅಡಚಣೆ ಉಂಟಾಯಿತು. ಆದರೆ ಹವಾಮಾನ ತಕ್ಕಮಟ್ಟಿಗೆ ಸುಧಾರಿಸಿದ ನಂತರ, ಸೇನಾ ಹೆಲಿಕಾಪ್ಟರ್‌ಗಳ ಸಹಾಯದಿಂದ ಕಾರ್ಯಾಚರಣೆ ಪುನಾರಂಭವಾಯಿತು.
ಮತ್ತುಂದೆಡೆ, ಜಿಒಸಿ-ಇನ್-ಸಿ ಸೆಂಟ್ರಲ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಅನಿಂದ್ಯಾ ಸೇನ್‌ಗುಪ್ತಾ ಮತ್ತು ಜಿಒಸಿ ಉತ್ತರ ಭಾರತ ಪ್ರದೇಶದ ಲೆಫ್ಟಿನೆಂಟ್ ಜನರಲ್ ಡಿಜಿ ಮಿಶ್ರಾ ಸ್ಥಳಕ್ಕೆ ಭೇಟಿ ನೀಡಿ, ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು. ಪತ್ತೆಹಚ್ಚಲು ವಿಶೇಷ ರೇಡಾರ್‌ಗಳು, ಯುಎವಿಗಳು, ಕ್ವಾಡ್‌ಕಾಪ್ಟರ್‌ಗಳು ಮತ್ತು ಹಿಮಪಾತ ರಕ್ಷಣಾ ನಾಯಿಗಳನ್ನು ಬಳಕೆ ಮಾಡಲಾಗಿದೆ.
ಹೆಚ್ಚಿನ ಕ್ರಮಗಳು
ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸೇನಾ ಸಿಬ್ಬಂದಿಗಳು ಅಗತ್ಯ ಉಪಕರಣಗಳನ್ನು ಸಾಗಿಸಲು ಮತ್ತು ಗಾಯಾಳುಗಳನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್‌ಗಳನ್ನೂ ಬಳಸುತ್ತಿದ್ದಾರೆ. ಭಾರತೀಯ ಸೇನೆಯ ವೈದ್ಯರು ಗಂಭೀರವಾಗಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಿದ್ದಾರೆ. ಇದಲ್ಲದೆ, ಭಾರತೀಯ ಸೇನಾ ವಿಮಾನಯಾನ ಮತ್ತು ವಾಯುಪಡೆಯ ಎಂಟು ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಈವರೆಗೆ ಒಟ್ಟು 19 ಜನರನ್ನು ಮಾನಾದಿಂದ ಜೋಶಿಮಠಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಭಾರತೀಯ ಸೇನೆಯ ಉನ್ನತ ಅಧಿಕಾರಿಗಳು ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಮಾನಾದಲ್ಲಿ ತೀವ್ರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸೇನೆ ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಹಿಮಪಾತದಿಂದ ಸಿಲುಕಿದ ಇತರರನ್ನು ರಕ್ಷಿಸಲು ನಿರಂತರ ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಕೆ. ಜೋಶಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ